Ninna Yelubininda Banda Naari kannada wedding song lyrics – ನಿನ್ನ ಎಲುಬಿನಿಂದ ಬಂದ ನಾರಿ
Ninna Yelubininda Banda Naari kannada wedding song lyrics – ನಿನ್ನ ಎಲುಬಿನಿಂದ ಬಂದ ನಾರಿ
ನಿನ್ನ ಎಲುಬಿನಿಂದ ಬಂದ ನಾರಿ
ಇವಳೇ ನಿನಗೆ ಸರಿ ಜೋಡಿ (2)
ನಿನ್ನ ಶರೀರಕ್ಕೆ ತಲೆ ಆದವನು
ನಿನ್ನ ಬಾಳಿಗೆ ಜೊತೆ ಎಂದೆಂದಿಗೂ (2)
ನೋಡಿಕೋ, ನೋಡಿಕೋ, ನಿನ್ನ ಕಣ್ಣಿನ ಹಾಗೆ (2)
ನೋಡಿಕೋ, ನೋಡಿಕೋ, ನಿನ್ನ ಸ್ವಂತ ಶರಿರದಂತೆ (2)
//ನಿನ್ನ ಎಲುಬಿನಿಂದ ಬಂದ ನಾರಿ //
1.ಒಂಟಿಯಾಗಿ ಇರುವುದು ಸರಿ ಇಲ್ಲವೆಂದು (2)
ನಿನ್ನ ಬಾಳನ್ನು ನಿನ್ನ ಮನೆಯನ್ನು (2)
ಬೆಳಗುವ ಸತಿಯೂ ಇವಳೇ, ಕಟ್ಟುವ ಸಾತಿಯು ಇವಳೇ (2)
ನೋಡಿಕೋ, ನೋಡಿಕೋ, ನಿನ್ನ ಸ್ವಂತ ಶರಿರದಂತೆ (2)
2.ಕಹಿಯಲ್ಲಿ ಸಿಹಿಯಲ್ಲಿ ಜೊತೆಯಾಗಿ ಬಾಳಿ ನೀವು (2)
ಇದು ದೇವರ ಕಾರ್ಯ ಇದನ್ನು ಮರೆಯಬೇಡಿರಿ (2)
ಮಾಡುವೆ ದೇವರ ನಿಯಮ (2)
ನೋಡಿಕೋ, ನೋಡಿಕೋ, ನಿನ್ನ ಸ್ವಂತ ಶರಿರದಂತೆ (2)
3.ದೇವರು ಕೂಡಿಸಿದ ಜೋಡಿಗಳು ನೀವು (2)
ಯಾವ ಮನುಷ್ಯನು ಅಗಲಿಸಲಾಗದು (2)
ಮಾಡುವೆ ಮಾನ್ಯವಾದದ್ದು (2)
ನೋಡಿಕೋ, ನೋಡಿಕೋ, ನಿನ್ನ ಸ್ವಂತ ಶರಿರದಂತೆ (2)
//ನಿನ್ನ ಎಲುಬಿನಿಂದ ಬಂದ ನಾರಿ //