ಕ್ರಿಸ್ತ ಹುಟ್ಟಿದ Christian Devotional Song- Kannada- Christmas song
ಕ್ರಿಸ್ತ ಹುಟ್ಟಿದ
ಜಗವ ಬೆಳಗಿದ!೨!
ಸಂತೋಷವ… ಸಂಗೀತವ.. ನಮ್ಮಲಿ ತುಂಬಿದ ನಮ್ಮ ಜೀವನ ಚೇತನ ಹರುಷ ತಂದ ದಿನ
ಶುಭಾಶಯ… ಶುಭೋದಯ… ಕ್ರಿಸ್ತ ಹುಟ್ಟಿದ ದಿನವಿದು..
ಭವ್ಯ ಬಾನಲಿ ಚುಕ್ಕಿ ಸಾರಿತು ಕಂದನ ಜನನವನು
ಬೆಟ್ಟ ತಾಣದಿ ಹಸಿರು ಮಡಿಲಲಿ ಮಲಗಿಹ ಕುರುಬರಿಗೆ…
ದೂತರ ಒಡಗೂಡಿ ಮುದ್ದಾಗಿ ಮಲಗಿಹ ಕಂದನ ಕಾಣಲು ಬಂದರು ಗೋದಲಿಗೆ…
ಸಂತೋಷವ… ಸಂಗೀತವ.. ನಮ್ಮಲಿ ತುಂಬಿದ ನಮ್ಮ ಜೀವನ ಚೇತನ ಹರುಷ ತಂದ ದಿನ
ಕ್ರಿಸ್ತ ಹುಟ್ಟಿದ..ಜಗವ ಬೆಳಗಿದ
ದೈವ ರೂಪವು ಧರೆಗೆ ಬಂದಿದೆ ಹರುಷದಿ ಹಾಡುವ
ಕ್ರಿಸ್ತ ತಂದಿಹ ಶಾಂತಿ ಹಂಚುತಾ ಮನಗಳ ಸೆಳೆಯೋಣ…
ಕಂದನ ಮುಖದಲಿ ಮುಗುಳ್ನಗೆ ಕಂಡರು ಬೆಳದಿಂಗಳಲಿ ಲೋಕದ ರಕ್ಷಕನ…
ಕ್ರಿಸ್ತ ಹುಟ್ಟಿದ..ಜಗವ ಬೆಳಗಿದ
ಸಂತೋಷವ… ಸಂಗೀತವ.. ನಮ್ಮಲಿ ತುಂಬಿದ ನಮ್ಮ ಜೀವನ ಚೇತನ ಹರುಷ ತಂದ ದಿನ
ಶುಭಾಶಯ… ಶುಭೋದಯ… ಕ್ರಿಸ್ತ ಹುಟ್ಟಿದ ದಿನವಿದು..