Rakshakanindu Hutti Banda Kannada Christmas Song lyrics – ರಕ್ಷಕನಿಂದು ಹುಟ್ಟಿಬಂದ
Rakshakanindu Hutti Banda Kannada Christmas Song lyrics – ರಕ್ಷಕನಿಂದು ಹುಟ್ಟಿಬಂದ
ರಕ್ಷಕನಿಂದು ಹುಟ್ಟಿಬಂದ
ನಮಗಾಗಿಯೇ ನಮಗಾಗಿಯೇ
||ಹಾಡೋಣ ನಾವು ನಮಿಸೋಣ
ಹೊಸಗೀತೆಯೊಂದಿಗೆ ಸ್ತುತಿಸೋಣ||
1.||ಸಾರುವೆವು ನಾವಿಂದು ಶುಭವಾರ್ತೆಯ
ಪರಲೋಕದ ದಿವ್ಯ ವಾರ್ತೆಯ||
||ಹರುಷದಿ ಹಾಡುವೆವು ಶ್ರೇಷ್ಠ ವಾರ್ತೆಯ
ಪಾಪಿಗಳನ್ನು ಪ್ರೀತಿಸುವ ಶುಭವಾರ್ತೆಯ||
2.||ಪರಲೋಕ ಮಹಿಮೆಯ ತ್ಯಜಿಸಿದನು
ಕಂದನಾಗಿ ಇಂದು ಜನಿಸಿದನು||
||ರಕ್ಷಣೆಯ ನೀಡುವ ಶ್ರೇಷ್ಠ ವಾರ್ತೆಯ
ಪಾಪಿಗಳನ್ನು ಪ್ರೀತಿಸುವ ಶುಭವಾರ್ತೆಯ||