Preethiulla Thande Neene kannada song lyrics – ಪ್ರೀತಿಯುಳ್ಳ ತಂದೆ ನೀನೇ
Preethiulla Thande Neene kannada song lyrics – ಪ್ರೀತಿಯುಳ್ಳ ತಂದೆ ನೀನೇ
ಅಪ್ಪ ಅಪ್ಪ ನನ್ನ ಯೇಸಪ್ಪ
ನಿನ್ನಂತೆ ಯಾರೂ ಇಲ್ಲ ಯೇಸಪ್ಪ -2
ಪ್ರೀತಿಯುಳ್ಳ ತಂದೆ ನೀನೇ
ಮಮತೆಯುಳ್ಳ ತಾಯಿ ನೀನೆ-2
1.ಈ ಲೋಕದಲ್ಲಿ ನಾನು
ಪಾಪಿಯಾಗಿ ಅಲೆಯುತ್ತಿದ್ದೆ
ಕೆಟ್ಟು ಹೋದ ನನ್ನನ್ನು ಹುಡುಕಿ ಬಂದೆ-2
ಓ.. ನನ್ನ ಪಾಪಕ್ಕೆ ನೀ ಬಲಿಯಾದೆಯ
ಓ..ನನ್ನ ಶಾಪವ ನೀ ಹೊತ್ತೆಯ-2
ಮರಣದಿಂದ ಬಿಡಿಸಿರುವೆ
ಓ ಯೇಸಪ್ಪ ನರಕದಿಂದ ತಪ್ಪಿಸಿರುವೆ-2
2.ಕಷ್ಟದಲ್ಲಿ ನಾನು ಇದ್ದೆ
ಕಣ್ಣಿರಲ್ಲಿ ಮುಳುಗಿ ಹೋದೆ
ನನ್ನ ಕೂಗು ಕೇಳಿ ಬಂದೆ ಓ ಯೇಸಯ್ಯ -2
ನನ್ನ ಬಂಧುಗಳು ಕೈ ಬಿಟ್ಟರು
ನನ್ನ ಆತ್ಮೀಯರು ದೂರಾದರೂ-2
ನೀ ನನ್ನ ಕೈ ಬಿಡಲಿಲ್ಲ ಓ ಯೇಸಪ್ಪ
ನನ್ನ ಬಾಳಲ್ಲಿ ನೀನೇ ಎಲ್ಲಾ-2
ನಿನಗಾಗಿ ಕಾದಿರುವ ನಿನ್ನನೇ ದೃಷ್ಟಿಸುವೆ
ಯಾವಾಗ ನೀ ಬರುವೆ ಓ ಯೇಸಪ್ಪ-2
ಓ ..ನಿನ್ನ ತೋಳಲ್ಲಿ ನಾ ಮಲಗಲು
ಓ ..ನಿನ್ನ ಪ್ರೀತಿಯ ನಾ ಸವಿಯಲು -2
ನಿನಗಾಗಿ ಕಾದಿರುವೆ
ಓ ಯೇಸಪ್ಪ ನಿನಗಾಗಿ ತವಕಿಸುವೆ-2
Preethiulla Thande Neene is a soul-stirring Kannada gospel song that beautifully encapsulates the boundless love of the Heavenly Father.