Christmas Banthu – ಕ್ರಿಸ್ಮಸ್ ಬಂತು ಹರುಷ ತಂತು

ಕ್ರಿಸ್ಮಸ್ ಬಂತು ಹರುಷ ತಂತು
ಹಾಡಿ ಕುಣಿಯುವ ಸಮಯ ಬಂತು
|| ಒಂದಾಗಿ ಸೇರೋಣ ಉಲ್ಲಾಸ ಪಡೋಣ
ಆತನ ಪ್ರೀತಿಯನ್ನು ನಾವೆಲ್ಲಾ ಸವಿಯೋಣ ||

1 ಬೇತ್ಲೆಹೇಮಿನಲ್ಲಿ ನನಗಾಗಿಯೇ ರಕ್ಷಕ ಹುಟ್ಟಿದ್ದಾನೆ
ತಂದೆಯ ಪ್ರೀತಿಯ ಕುಮಾರನು ನನಗಾಗಿ ಬಂದಿದ್ದಾನೆ
|| ಕ್ರಿಸ್ಮಸ್ ಬಂತು||

2. ಮೇಲಣ ಲೋಕದಲ್ಲಿ ದೇವರಿಗೆ ಮಹಿಮೆ ಉಂಟಾಗಲಿ
ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ ಉಂಟಾಗಲಿ
|| ಕ್ರಿಸ್ಮಸ್ ಬಂತು||

3. ಕತ್ತಲಲ್ಲಿರುವ ಜನರಿಗಾಗಿಯೇ ಬೆಳಕಾಗಿ ಬಂದಿದ್ದಾನೆ
|| ಬೆಳಕಿನ ಜೀವಿತವ ಜೀವಿಸುತ ಮಾರ್ಗವ ತೋರಿದ್ದಾನೆ || ೨|| | ನಾವು |
|| ಕ್ರಿಸ್ಮಸ್ ಬಂತು||
|| Happy Christmas Merry Christmas
Let’s all celebrate real Christmas ||

We will be happy to hear your thoughts

      Leave a reply