Balapadiso Kristhanindale – ಬಲಪಡಿಸೋ ಕ್ರಿಸ್ತನಿಂದಲೆ

Deal Score+2
Deal Score+2

Balapadiso Kristhanindale – ಬಲಪಡಿಸೋ ಕ್ರಿಸ್ತನಿಂದಲೆ

Nanna arambhavu, nanna madhyasthanu

ನನ್ನ ಆರಂಭವು, ನನ್ನ ಮಧ್ಯಸ್ಥನು, ನನ್ನ ಅಂತ್ಯವೂ ನೀನೇ ಯೇಸು
ನನ್ನ ಆಧಾರವು, ನನ್ನ ಆಸೆಯು, ನನ್ನ ಆನಂದವು ನೀನೇ ಯೇಸು

Chorus:
ಬಲಪಡಿಸೋ ಕ್ರಿಸ್ತನಿಂದಲೆ
ಎಲ್ಲವ ಮಾಡಲು ಶಕ್ತನಾದೆನು
ಇನ್ನು ಜೀವಿಸುವದು ನಾನಲ್ಲ
ನನ್ನಲಿ ಯೇಸು ಜೀವಿಸುವ

Verse 1:
ಪರಿಚಯವಿಲ್ಲದ ಈ ಲೋಕದಲ್ಲಿ
ನಿನ್ನ್ ಸಮುಖವು ನನ್ನ ವಿಳಾಸವಾಯಿತು
ರೂಪವ ಕಳೆದುಕೊಂಡು ಅಲೆದಾಡಿದೆನು
ನಿನ್ನ ಮಹಿಮೆಯ ಸ್ವರೂಪದಿ ಅಲಂಕರಿಸಿದೆ

ಈ ಲೋಕವು ಬೇಡವೆಂದು ತಳ್ಳಿದರು
ನಿನ್ನ ಎದೆಗೆ ಹೊರಗಿಸಿ ಅಪ್ಪಿಕೊಂಡೇ
ನಿರಾಕರಿಸಿ ಕೈ ಬಿಟ್ಟ ಬಂಡೆಯು ನಾನು
ಮೂಲೆಗಲ್ಲಾಗಿ ಮಾರ್ಪಡಿಸಿದೇ

Verse2:
ದ್ವೇಷ ವಿವಾದಗಳಿಗೆ ಗುರಿಯಾದೆನು ನಾ
ನಿನ್ನ ನೀತಿಗೆ ಸರಿಯಾಗಿ ನನ್ನ ನಡೆಸಿದೆ
ಮೋಸ ವಂಚನೆಯಲಿ ಮುಳುಗಿ ಹೋದೆ ನಾ
ನಿನ್ನ ಕೃಪೆ ನೀಡಿ ನನ್ನನು ಧೈರ್ಯಗೊಳಿಸಿದೆ

ನನ್ನ ಗೌರವಕ್ಕೆ ಆಧಾರವು ನೀನೇ ಯೇಸು
ನನ್ನ ತಲೆಯನ್ನು ಎತ್ತುವಂತೆ ಮಾಡಿರುವೆ
ನಿಂದೆಯು ಅವಮಾನವು ನನ್ನ ಪಾಲಾದರು
ನಿನ್ನ ಪ್ರೀತಿಯ ಒಲವು ನನ್ನ ಬಲವಾಯಿತು

Verse3:
ದರುಶನ ಗುರಿ ಇಲ್ಲದ ನನ್ನ ಪಯಣವ
ನಿನ್ನ ಹಿತವಾದ ಚಿತ್ತದಲ್ಲಿ ನನ್ನ ನಡೆಸಿದೆ
ದೀನನು ಅಲ್ಪನು ಬಲಹೀನನು ನಾ
ನಿನ್ನ ಆತ್ಮದಿ ಅಭಿಷೇಕಿಸಿ ಸೇವೆಗೆ ಕರೆದೆ

ಅಪಕಾರವ ಬಯಸುವ ಈ ಲೋಕದಲ್ಲಿ ಉಪಕಾರವ ಮಾಡಿ ಸಂತೃಪ್ತಿಪಡಿಸಿದೆ
ನನ್ನ ಕಷ್ಟಾರ್ಥಗಳನ್ನು ಪರಿಹರಿಸಿ
ನನ್ನ ಇಷ್ಟಾರ್ಥಗಳನ್ನು ನೆರವೆರಿಸಿದೆ

    Jeba
        Tamil Christians songs book
        Logo