Koti Koti Sthuti kannada song lyrics – ಕೋಟಿ ಕೋಟಿ ಸ್ತುತಿ

Deal Score0
Deal Score0

Koti Koti Sthuti kannada song lyrics – ಕೋಟಿ ಕೋಟಿ ಸ್ತುತಿ

ಎಣಿಸಲು ಆಗದ ಅತಿಶಯವ
ನನ್ ಬಾಳಲಿ ಮಾಡ್ವವವನೇ
ಎಣಿಸಲು ಆಗದ ಅದ್ಭುತವ
ನನ್ ಬಾಳಲಿ ಮಾಡ್ವವನೇ ||2||

ಕೋಟಿ ಕೋಟಿ ಸ್ತುತಿ ಹೇಳಿದರೂ
ನಿನಗದು ಸಮವಾಗ್ವಾದೋ….
ಕೋಟಿ ಕೋಟಿ ಸ್ತುತಿ ಹೇಳಿದರೂ
ನನ್ ಬಾಳೇ ಸಾಕಾಗ್ವದೋ..||2||

ಚರಣ (1)
ತಕ್ಕ ಸಮಯದಲಿ – ಮಾತನು ಕೊಟ್ಟು
ನನ್ನ ಸೋಲದಂತೆ ನಡೆಸಿದ್ದನ್ನು ನೆನಸಿ ಹಾಡುವೆ
ಸೋತ ಸಮಯದಲಿ – ಕೃಪೆಯನು ತಂದು
ನನ್ನ ಬೀಳದಂತೆ ಹೊತ್ತದನ್ನು – ಹಾಡಿ ಹರಸುವೆ||2||
ಕೈಯ ಬಿಡಾದೆ ಕಾದಿರುವೆ ನೀ
ನಿನ್ನ ವಾಕ್ಯದಿಂದ ನಡೆಸಿದೆ ಅಯ್ಯಾ ||2||
||ಕೋಟಿ ಕೋಟಿ ||

ಚರಣ (2)
ಒಂಟಿಯಾಗಿ ನಾ ಅಲೆದಾಗೆಲ್ಲ(ಅಳುವಾಗಲ್ಲಾ)
ಒಬ್ಬ ತಾಯಿಯಂತೆ ಸಂತೈಸಿದ -ನೆನಸಿ ಹಾಡಿವೆ
ಕೊರೆತೆಯಲ್ಲಿ ನಾ ಇರುವಾಗೆಲ್ಲಾ
ಒಬ್ಬ ತಂದೆಯಂತೆ ಒದಗಿಸಿದ ಹಾಡಿ ಹರಸುವೆ||2||
ಕೊರೆತೆಯಲೆಲ್ಲಾ ಕೃಪೆಯನು ತಂದು
ನನ್ನ ತಳ್ಳಾದೆ ಸೇರಿಸಿಕೊಂಡೆ||2||
||ಕೋಟಿ ಕೋಟಿ||

ಚರಣ(3)
ದೀನ ದರಿದ್ರನು ಆದ ನನ್ನನು
ಆರಿಸಿ ನೀ ಹರಸಿದ್ದನ್ನು – ನೆನಸಿ ಹಾಡುವೆ
ಅಸ್ತವ್ಯಸ್ತವಾದ ನನ ಬಾಳನು
ಸೌಂದರ್ಯದಲಿ ಕ್ರಮಪಡಿಸಿದೆ – ಹಾಡಿ ಹರಸುವೆ || 2||
ಧೂಳಿನಿಂದ ಮೇಲಕ್ಕೆತ್ತಿ ನನ್ನ ತಲೆಯಾಗಿ ಮಾಡಿದೆ ಅಯ್ಯಾ ||2||
||ಕೋಟಿ ಕೋಟಿ||

    Jeba
        Tamil Christians songs book
        Logo