Karedatane Kannada Gospel Song lyrics – ಕರೆದಾತನೇ ಕಾಯುವ ಆತನೇ
Karedatane Kannada Gospel Song lyrics – ಕರೆದಾತನೇ ಕಾಯುವ ಆತನೇ
ಕರೆದಾತನೇ ಕಾಯುವ ಆತನೇ
ನಂಬಿಗಸ್ತನೆ ನಡೆಸುವವನೇ
ಪೂರ್ಣ ಬಲದಿ ಪೂರ್ಣ ಮನದಿ
ನಿನ್ನನ್ನೇ ಆಶ್ರಯಿಸುವೆ ಯೇಸಯ್ಯ
ಪೂರ್ಣ ಬಲದಿ ಪೂರ್ಣಮನದಿ
ನಿನ್ನನ್ನೇ ಸ್ತುತಿಸುವೆ ಯೇಸಯ್ಯ
ಯೇಸಯ್ಯ ಯೆಸಯ್ಯ ಯೆಸಯ್ಯ ನೀ ನನ್ನ ದೇವಾ
ತೆರೆಗಳು ಎದುರಾದರು
ಬಿರುಗಾಳಿ ಬೀಸಿದರು
ಭಯವು ಆವರಿಸಿದರೂ
ಕತ್ತಲೆಯೂ ನನ್ನ ಕವಿದರು – 2
ನೀನಿರುವಾಗ ನಾ ಬೀಳೇನು
ನೀನಿರುವಾಗ ನಾ ಮುಳುಗೇನು – 2
ನೀ ನನ್ನ ನಾವಿಕ ನಿನ್ನನ್ನೇ ನಾ ನಂಬುವೆ
ನೀ ನನ್ನ ರಕ್ಷಕ ನಿನ್ನನ್ನೇ ನಾ ಬಯಸುವೆ
ಯೇಸಯ್ಯ…… ನೀ ನನ್ನ ದೇವ
ಹಿಂಸೆಯೂ ಹೆಚ್ಚಾದರೂ
ಬಾದೆಯೂ ಅತಿಯಾದರು
ಕಣ್ಣೀರು ಬಗ್ಗೆಯಾದರು,
ಮರಣವೇ ಸಮೀಪಿಸಿದರು – 2
ನನ್ನ ತಪ್ಪಿಸುವೆ ನನ್ನ ಕಾದಿರುವೆ
ನಿನ್ನ ಆತ್ಮದ ನನ್ನ ನಡೆಸಿರುವೆ
ನೀ ನನ್ನ ನಾಯಕ ನನ್ನನ್ನು ನೀ ನಡೆಸುವೆ
ನೀ ನನ್ನ ಪಾಲಕ ನನ್ನನ್ನು ನೀ ಪೋಷಿಸುವೆ
ಯೇಸಯ್ಯ….. ನೀ ನನ್ನ ದೇವ
ಕರೆದಾತನೇ ಕಾಯುವ ಆತನೇ ನಂಬಿಗಸ್ತನೆ ನಡೆಸುವವನೇ