ಹೊಸ ವರ್ಷವನ್ನು – Hosa Varshavannu Kannada New Year Song

Deal Score0
Deal Score0

ಹೊಸ ವರ್ಷವನ್ನು – Hosa Varshavannu Kannada New Year Song

ಹೊಸ ವರ್ಷವನ್ನು ತಂದ ಯೇಸುವೇ
ಕಳೆದ ವರ್ಷವೆಲ್ಲ ಕಾಪಾಡಿದೆ {2}
ಯೇಸುವೇ ನಿನಗೆ ಸ್ತೋತ್ರವು
ಯೇಸುವೇ ನಿನಗೆ ವಂದನೆ {2}
|| ಹೊಸ ವರ್ಷವನ್ನು ||

1. ಬಲಹೀನದಲ್ಲಿ ಬಲ ನೀಡಿದೆ
ಸೋತು ಹೋದಾಗ ಧೈರ್ಯ ನೀಡಿದೆ {2}
ನಿನ್ನ ವಾಕ್ಯದಿಂದ ಸಂತೈಸಿದೆ.
ಶೋಧನೆಯಿಂದ ಜಯವನ್ನು ನೀಡಿದೆ {2}
ಯೇಸುವೇ ನಿನಗೆ ಸ್ತೋತ್ರವು
ಯೇಸುವೇ ನಿನಗೆ ವಂದನೆ {2}
|| ಹೊಸ ವರ್ಷವನ್ನು ||

2. ಎಲ್ಲಾ ಕೇಡಿನಿಂದ ನನ್ನನ್ನು ತಪ್ಪಿಸಿದೆ
ನನ್ನ ಪ್ರಾಣವನ್ನು ಕಾಪಾಡಿದೆ {2}
ನಿನ್ನ ಕೃಪೆಯಿಂದ ನನ್ನನ್ನು ರಕ್ಷಿಸಿದೆ
ವಿಶೇಷವಾದ ರಕ್ಷಣೆಯನ್ನು ತೋರಿಸಿದೆ {2}
ಯೇಸುವೇ ನಿನಗೆ ಸ್ತೋತ್ರವು
ಯೇಸುವೇ ನಿನಗೆ ವಂದನೆ {2}
|| ಹೊಸ ವರ್ಷವನ್ನು ||

3. ಇದುವರೆಗೂ ನನ್ನನ್ನು ನಡೆಸಿದೆ
ನಿನಗಾಗಿ ಸಾಕ್ಷಿಯಾಗಿ ಬಾಳುವೆ {2}
ನಿನ್ನ ನಾಮದಲ್ಲಿ ಜಯ ಹೊಂದುವೇ
ನಿನ್ನ ಪ್ರೀತಿಯನ್ನು ಸಾರಿ ಹೇಳುವೆ
ಯೇಸುವೇ ನಿನಗೆ ಸ್ತೋತ್ರವು
ಯೇಸುವೇ ನಿನಗೆ ವಂದನೆ {2}
|| ಹೊಸ ವರ್ಷವನ್ನು ||

 

    Jeba
        Tamil Christians songs book
        Logo