KANNADA CHRISTMAS SONG ಕ್ರಿಸ್ಟಮಸ್ ಹಾಡು

Deal Score+1
Deal Score+1

ಆ ಭಾನು ಬೆಳಗಿತು ಈ ಭೂಮಿ ಹರ್ಷಿಸಿತ್ತು ಯೆಸಯ್ಯ ಜನಿಸಿದಾಗ
ರಕ್ಷಕನಾಗಿ ಬಂದ ನೋಡು ಯೇಸು ನಾಥನು ಈ ಭೂಮಿಗೆ
ದೂತರು ಸ್ತೋತ್ರ ಗೀತೆಯ ಹಾಗಿ ಹರ್ಷದಿಂದ ಸ್ತುತಿಸಿದರು
ಸಂಭ್ರಮವೇ ಸಂಭ್ರಮವೋ ಶ್ರೀಯೇಸು ರಾಜನಿಗೆ ವಂದನೆಗಳು

ಸರ್ವೋನ್ನತ ಸ್ಥಳಗಳಲ್ಲಿ ದೇವರಿಗೆ ಮಹಿಮೆ ಹಲ್ಲೆಲೂಯ ಹಲ್ಲೆಲೂಯ
ಇಷ್ಟವಾದ ಮನುಷ್ಯರೊಳಗೆ ಭೂಮಿಯಲ್ಲಿ ಸಮಾಧಾನ ಹಲ್ಲೆಲೂಯ ಹಲ್ಲೆಲೂಯ

ಯೂದಯ ದೇಶದಲ್ಲಿ ಬೆಥ್ಲೆಹೆಮ್ ಗ್ರಾಮದಲ್ಲಿ ಶ್ರೀಯೇಸು ಜನಿಸಿದನು
ಸರ್ವ ಲೋಕ ಬಿಡುಗಡಿಗೆ ದಾವೀದನ ವಂಶದಲ್ಲಿ ಶ್ರೀಯೇಸು ಜನಿಸಿ ಬಂದನು
ದೂತರ ವಾರ್ತೆ ಕೇಳಿದಾಗ ಆ ಕುರಿಗಳ ಕುರುಬರು
ತಾರೆ ಮಾರ್ಗ ತೋರಿದಾಗ ಮುಡಣ ಜೋಯಿಸರು
ನೋಡ ಬಂದರು ನಮಸ್ಕರಿಸಿದರು ಕಾಣಿಕೆ ನೀಡಿ ಆರಾಧಿಸಿದರು

ಸರ್ವೋನ್ನತ ಸ್ಥಳಗಳಲ್ಲಿ ದೇವರಿಗೆ ಮಹಿಮೆ ಹಲ್ಲೆಲೂಯ ಹಲ್ಲೆಲೂಯ
ಇಷ್ಟವಾದ ಮನುಷ್ಯರೊಳಗೆ ಭೂಮಿಯಲ್ಲಿ ಸಮಾಧಾನ ಹಲ್ಲೆಲೂಯ ಹಲ್ಲೆಲೂಯ

ಕೆಟ್ಟುಹೋದ ಮಾನವರ ಹುಡಿಕಿ ರಕ್ಷಿಸಲು ಮನುಷ್ಯರೂಪ ತಾಳಿಬಂದನು
ತನ್ನ ಪ್ರಜೆಯ ಬಿಡುಗಡೆಗೆ ಸರ್ವೋನ್ನತ ಮಗನಾಗಿ ಶಿಲುಬೆಯ ಮರಣ ಹೊಂದಿದ
ಪಾಪವೆಲ್ಲ ಶಾಪವೆಲ್ಲ ತೊಲಗಿ ಹೋಯಿತಲ್ಲ
ವ್ಯಾಧಿಯೆಲ್ಲಾ ಬಾಧೆಯೆಲ್ಲಾ ತೀರಿ ಹೂಯಿತಲ್ಲಾ
ದುಖ್ಖವಿಲ್ಲವೇ ಮರಣವಿಲ್ಲವೇ ಯಾವ ಭಯವು ಬಳಿಗೆ ಬಾರದು

ಸರ್ವೋನ್ನತ ಸ್ಥಳಗಳಲ್ಲಿ ದೇವರಿಗೆ ಮಹಿಮೆ ಹಲ್ಲೆಲೂಯ ಹಲ್ಲೆಲೂಯ
ಇಷ್ಟವಾದ ಮನುಷ್ಯರೊಳಗೆ ಭೂಮಿಯಲ್ಲಿ ಸಮಾಧಾನ ಹಲ್ಲೆಲೂಯ ಹಲ್ಲೆಲೂಯ

christians
We will be happy to hear your thoughts

      Leave a reply

      Tamil Christians songs book
      Logo