Krupeye – ಕೃಪೆಯೇ ಕೃಪೆಯೇ ಕೃಪೆಯೇ Lyrics
Krupeye – ಕೃಪೆಯೇ ಕೃಪೆಯೇ ಕೃಪೆಯೇ Lyrics
ಕೃಪೆಯೇ ಕೃಪೆಯೇ ಕೃಪೆಯೇ, ಎಲ್ಲಾ ನಿನ್ನಯ ಕೃಪೆಯೇ
ಕೃಪೆಯೇ ಕೃಪೆಯೇ ಕೃಪೆಯೇ, ಯೇಸುವೇ ಎಲ್ಲಾ ನಿನ್ ಕೃಪೆಯೇ
ನಾ ಜೀವದಿಂದಿರುವುದು ನಿನ್ನಯ ಕೃಪೆಯೇ
ನನ್ ಪ್ರಾಣವು ಶ್ವಾಸವು ನಿನ್ನಯ ಕೃಪೆಯೇ(2)
ಕೃಪೆಯೇ ಕೃಪೆಯೇ ಕೃಪೆಯೇ, ಎಲ್ಲಾ ನಿನ್ನಯ ಕೃಪೆಯೇ
ಕೃಪೆಯೇ ಕೃಪೆಯೇ ಕೃಪೆಯೇ, ಯೇಸುವೇ ಎಲ್ಲಾ ನಿನ್ ಕೃಪೆಯೇ
1. ಒದಗಿಸುವಾತನೇ ಒದಗಿಸುತ್ತಿರುವೆ
ಹಸಿರಾದ ಹುಲ್ಲಿಗೆ ನನ್ನ ನಡೆಸುತ್ತಿರುವೆ
ಒದಗಿಸುವಾತನೇ ಒದಗಿಸುತ್ತಿರುವೆ
ತಂಪಾದ ನೀರಿಗೆ ನನ್ನ ನಡೆಸುತ್ತಿರುವೆ
ಕೊರತೆಯು ನನ್ನ ಗುಡಾರವನ್ನು ತಾಕದಂತೆ ನೀ ನಡೆಸುತ್ತಲಿರುವೆ
ಕೃಪೆಯೇ ಕೃಪೆಯೇ ಕೃಪೆಯೇ, ಎಲ್ಲಾ ನಿನ್ನಯ ಕೃಪೆಯೇ
ಕೃಪೆಯೇ ಕೃಪೆಯೇ ಕೃಪೆಯೇ, ಯೇಸುವೇ ಎಲ್ಲಾ ನಿನ್ ಕೃಪೆಯೇ
2. ರಕ್ಷಿಸುವಾತನೇ ರಕ್ಷಿಸುತ್ತಿರುವೆ
ಕಣ್ಗುಡ್ಡೆಯಂತೆ ನೀ ನನ್ನ ಕಾಯುತ್ತಿರುವೆ
ರಕ್ಷಿಸುವಾತನೇ ರಕ್ಷಿಸುತ್ತಿರುವೆ
ನಿನ್ ಅಂಗೈಯಲ್ಲಿ ನನ್ನ ಚಿತ್ರಿಸಿರುವೆ
ನನ್ ಪ್ರಾಣವನ್ನು ಕೇಡಿನಿಂದ ತಪ್ಪಿಸಿ ನನ್ನನ್ನು ಕಾಯುತ್ತಲಿರುವೆ