Tandiya chittavannu mugisida Kannada Good Friday Song lyrics – ತಂದೆಯ ಚಿತ್ತವನ್ನು ಮುಗಿಸಿದ
Tandiya chittavannu mugisida Kannada Good Friday Song lyrics – ತಂದೆಯ ಚಿತ್ತವನ್ನು ಮುಗಿಸಿದ
ತಂದೆಯ ಚಿತ್ತವನ್ನು ಮುಗಿಸಿದ
ಯೇಸು ಮಾನವರಿಗೆ ರಕ್ಷಣೆಯ ನೀಡಿದ
ತೀರಿತೆಂದು ಜಯಘೋಷ ಮಾಡಿದ
ತನ್ನ ಆತ್ಮವ ತಂದೆಗೆ ಒಪ್ಪಿಸಿದ
||ತಂದೆಯ||
1.ತಂದೆಯ ಎದೆಯಲ್ಲಿ ಮುದ್ದು
ಮಗನಾಗಿದ್ದ ಸ್ವರ್ಗವನ್ನು ತ್ಯಜಿಸಿ ಈ ಭುವಿಗೆ ಬಂದ ||2|
ತನ್ನ ರಕ್ತವ ಸುರಿಸಿ ತನ್ನ ಪ್ರಾಣವ ನೀಡಿ 12॥
ತನ್ನನ್ನೇ ಬಲಿಯಾಗಿ ಸಮರ್ಪಿಸಿದ ತನ್ನನ್ನೇ ಬಲಿಯಾಗಿ ಸಮರ್ಪಿಸಿದ
||ತಂದೆಯ||
2.ದೇವರು ಲೋಕದ ಮೇಲೆ ಎಷ್ಟೋ
ಪ್ರೀತಿಯನ್ನಿಟ್ಟು ಒಬ್ಬನೆ ಮಗನನ್ನು ನಮಗೆ ಕೊಟ್ಟನು ॥2॥
ಪಾಪವ ಪರಿಹರಿಸಿ ನಿತ್ಯ ಜೀವ ನೀಡಲು ||2|
ಶರೀರಧಾರೆಯಾಗಿ ಯೇಸು ಬಂದನು ಶರೀರಧಾರೆಯಾಗಿ ಯೇಸು ಬಂದನು
||ತಂದೆಯ।