Taayiyante saaki Tandeyante Salahi Kannada song lyrics – ತಾಯಂತೆ ಸಾಕಿ

Deal Score0
Deal Score0

Taayiyante saaki Tandeyante Salahi Kannada song lyrics – ತಾಯಂತೆ ಸಾಕಿ

ತಾಯಂತೆ ಸಾಕಿ
ತಂದೆಯಂತೆ ಸಲಹಿ
ಹೆಗಲ ಮೇಲೆ ಹೊರುವಂತ ನನ್ ಯೇಸಯ್ಯ || 2 ||

ನಿಮ್ಮ ಹಾಗೆ ಅರಿತುಕೊಳ್ಳಲು ಯಾರು ಇಲ್ಲವೆ
ನಿಮ್ಮ ಹಾಗೆ ಅಪ್ಪಿಕೊಳ್ಳಲು ಯಾರು ಇಲ್ಲವೇ || 2 ||

ನೀ ಸಾಕು ನನ್ ಬಾಳಲಿ ಯೇಸಯ್ಯ ನೀ ಸಾಕು ನನ್ ಬಾಳಲಿ | 2 |
ತಾಯಂತೆ…

ಬೆಟ್ಟದಂತ ಕಷ್ಟ ಸುತ್ತುವರಿದರೂನು
ಹಿಮದಂತೆ ಅದನು ಕರಗಿಸುವಿರೆ || 2 ||
ಕಣ್ಮಣಿಯಂತೆ ನನ್ನ ಕಾಯ್ವವರೆ
ಅಂಗೈಯಲ್ಲಿ ಬರೆದೆನ್ನ ನೆನೆಸ್ವವರೆ || 2 ||

ನೀ ಸಾಕು ನನ್ ಬಾಳಲಿ ಯೇಸಯ್ಯ ನೀ ಸಾಕು ನನ್ ಬಾಳಲಿ | 2 |
ತಾಯಂತೆ…

ಬಲಹೀನ ಸಮಯ
ನನ್ನ ಕೃಪೆ ನಿನಗೆ ಸಾಕು
ನಿನ್ ಬಲಹೀನತೆಲಿ-ನನ್-ಬಲ ಕೊಡುವೆನೆಂದಿ || 2 ||
ನೆರಳಿನಂತೆ ನನ್ ಬಾಳಲಿ ಬರುವವರೆ
ಅಗಲದೆ ಜೊತೆಗಿದ್ದು ಕಾಯ್ವವರೆ || 2 ||

ನೀ ಸಾಕು ನನ್ ಬಾಳಲಿ ಯೇಸಯ್ಯ ನೀ ಸಾಕು ನನ್ ಬಾಳಲಿ | 2 |

Thai Pola Thettri Joseph Aldrin song translation in Kannada

    Jeba
        Tamil Christians songs book
        Logo