Priya Nanna Priya kannada christian song lyrics – ಪ್ರಿಯ ನನ್ನ ಪ್ರಿಯ ನನ್ನ ಪ್ರಿಯ ಯೇಸುನಿ
Priya Nanna Priya kannada christian song lyrics – ಪ್ರಿಯ ನನ್ನ ಪ್ರಿಯ ನನ್ನ ಪ್ರಿಯ ಯೇಸುನಿ
ಪ್ರಿಯ ನನ್ನ ಪ್ರಿಯ ನನ್ನ ಪ್ರಿಯ ಯೇಸುನಿ
ನಿನೆಷ್ಟು ಸುಂದರ ನಿನೆಷ್ಟು ಮನೋಹರ ನಿನೆಷ್ಟು ಒಳ್ಳೇವ
ನನ್ನ ಬಾಳೆ ಬಂಗಾರ (3)
1.ಪಾಪಿಯಾದ ನನ್ನನ್ನು ಹುಡುಕಿ ಬಂದು ರಕ್ಷಿಸಿದ ಯೇಸುವೆ
ನಿಮಗೆ ಸಾವಿರಾರು ಸ್ತೋತ್ರಗಳು
ಎಷ್ಟೊಂದು ಉಪಕಾರ ನೀನು ಮಾಡಿರುವೆ ಯಾವುದನ್ನು ಸ್ಮರಿಸಲಿ
ಏನೆಂದು ನಾ ಸ್ತುತಿಸಲಿ (2)
2.ಕಷ್ಟ ಸಂಕಟದಲ್ಲಿ ಕರ್ತನಿಗೆ ಕೂಗಲು ಹತ್ತಿರವಾದನು
ನನ್ನ ಜೀವಕ್ಕೆ ಜೀವವಾದನು
ಪ್ರಸನ್ನ ಮುಖದಿಂದ ನನ್ನನ್ನು ನೋಡಿದೆ ಇನಿಯ ಹರುಷದ ಹೊನಲಾದನು
ನನ್ನ ನೋವನ್ನು ಮರೆಸಿದನು (2)
- ನನಗೆ ದೊರೆತ ನಿನ್ನ ಮಾತುಗಳು ಆಹಾರ ಮಾಡಿಕೊಂಡೆ
ನನ್ನ ಎಲುಬಿಗೆ ಸಾರವಾಯಿತು
ಹೊಗಳಿಕೊಳ್ಳಲು ಏನು ಇಲ್ಲಪ್ಪ ಎಲ್ಲ ನಿನ್ನ ಕೃಪೆಯು
ನೀ ನನ್ನ ಬಾಳಿನ ಭಾಗ್ಯವು (2)
ಪ್ರಿಯ ನನ್ನ ಪ್ರಿಯ Kannada Christian Song with Lyrics Kannirina Moregalu Album