Ninnantha Devaru Yaru Illa kannada christian song lyrics – ನಿನ್ನಂತ ದೇವರು ಯಾರು ಇಲ್ಲ
Ninnantha Devaru Yaru Illa kannada christian song lyrics – ನಿನ್ನಂತ ದೇವರು ಯಾರು ಇಲ್ಲ
ನಿನ್ನಂತ ದೇವರು ಯಾರು ಇಲ್ಲ
ನಿನ್ನ ಹಾಗೆ ಪ್ರೀತಿಸುವವರು ಒಬ್ಬರು ಇಲ್ಲ
ಯೇಸಯ್ಯ ಯೇಸಯ್ಯ ನೀನಿಲ್ಲದೆ ನಾನಿಲ್ಲಯ್ಯ
ಪಾಪದ ಮರಣದಲ್ಲಿ ಇದ್ದಾಂತಹ ನನ್ನ
ಪ್ರೀತಿ ಮಾಡಿ ಪ್ರಾಣ ಕೊಟ್ಟು ಬದುಕಿಸಿದೆ ದೇವ
ನಿನ್ನ ಕೃಪೆ ಶಾಶ್ವತ ಎಂದೆಂದೂ ದೇವ
ನಿನ್ನ ಪ್ರೀತಿಯಿಂದ ನಾನು ಜೀವಿಸುವೆ ದೇವ
ನನ್ನಯ ಜೀವಿತವೆಲ್ಲವನ್ನು ತಿಳಿದಿರುವೆ ನೀನು
ನನ್ನಯ ಕುರಿತು ಹಿತವಾಗಿ ಚಿಂತಿಸುವೆ ನೀನು
ನಿನ್ನಯ ಕರದಿ ಹಿಡಿದು ನನ್ನ ನಡೆಸಿರುವೆ ದೇವ
ನನ್ನ ಸಹಾಯ ನನ್ನ ಬಂಡೆ ನೀನೇ ಯೇಸಯ್ಯ
ಕಷ್ಟಗಳಲ್ಲಿ ದುಃಖಗಳಲ್ಲಿ ಜೊತೆಯಾಗಿರುವವನು
ರೋಗದಲ್ಲಿ ಸಂಕಟದಲ್ಲಿ ಬಲವ ಕೊಡುವವನು
ಕೊರತೆಗಳನ್ನು ನೀಗಿಸುವವನು ನೀನೇ ಯೇಸಯ್ಯ
ಸೊಲುಗಳಲ್ಲಿ ಜಯವನ್ನು ಕೊಡುವ ದೇವಾ ನೀನಯ್ಯಾ