Janisi bandana nodu – ಜನಿಸಿ ಬಂದಾನ ನೋಡು
Janisi bandana nodu – ಜನಿಸಿ ಬಂದಾನ ನೋಡು kannada latest christmas song
ಜನಿಸಿ ಬಂದಾನ ನೋಡು ನನ್ನ ಯೇಸು
ಆಹಾ ಮುದ್ದು ಮುದ್ದಾದ ಬಾಲ ಯೇಸು
ಕನ್ಯ ಮರಿಯ ಮುದ್ದಿನ ಕಂದ
ಮಾನವನಾಗಿ ಧರಣಿಗೆ ಬಂದ
ಕಂದನ ನೋಡ ಬನ್ನಿರೋ ಕಣ್ತುಂಬ ಕಾಣ ಬನ್ನಿರೋ
ಎತ್ತಿನ ಗೋದಲಿ ಮರಿಯಮ್ಮ ಮಡಿಲಲ್ಲಿ
ಜಗದೊಡಿಯ ಉದಯಿಸಿದ ನಟ್ಟನಡು ರಾತ್ರಿಯಲ್ಲಿ 2
ನಡುಗುವ ಚಳಿಯಲ್ಲಿ ಕಸದ ರಾಶಿಯಲ್ಲಿ 2
ಕತ್ತಲೆ ಕೋಣೆಯಲ್ಲಿ ಜಗಜ್ಯೋತಿ ಉದಯಿಸಿದ
ಕಂದನ ನೋಡ ಬನ್ನಿರೋ ಕಣ್ತುಂಬ ಕಾಣ ಬನ್ನಿರೋ 2
ಕುರುಬರ ಆ ದಂಡು ಕಾಯುತ್ತಿರಲು ಕುರಿ ಹಿಂಡು
ಮೇಘದಿಂದ ಇಳಿದಿತ್ತು ದೂತರ ದಂಡು 2
ಹೆದರದೆ ಕೇಳಿರಿ ಭಯ ಪಡಬೇಡಿರಿ 2
ರಕ್ಷಕ ಜನಿಸಿದ ಇಂದು ಸಮಾಧಾನ ಕೊಡಲೆಂದು
ಕಂದನ ಕಾಣ ಬನ್ನಿರೋ ಕಣ್ತುಂಬ ನೋಡ ಬನ್ನಿರೋ 2
ಗಗನದಿ ಹೊಳೆಯುವ ಆ ದೊಡ್ಡ ತಾರೆಯ
ಜ್ಞಾನಿಗಳು ಕಂಡರು ದಿಗ್ಭ್ರಮೆಗೊಂಡರು 2
ಒಟ್ಟಾಗಿ ಸೇರಿದರು ತ್ವರೆಯಿಂದ ನಡೆದರು 2
ಚಿನ್ನ ರೂಪ ರಕ್ತ ಬೋಳ ಕಾಣಿಕೆ ಅರ್ಪಿಸಿದರು
ಕಂದನ ಕಾಣ ಬಂದರು ಮನಸಾರೆ ಸ್ತುತಿಗೈದರು