ಬದುಕುವೆ ನಾನು – Badukuve naanu

Deal Score0
Deal Score0

ಬದುಕುವೆ ನಾನು – Badukuve naanu

ಬದುಕುವೆ ನಾನು ನಿನ್‌ ಕೃಪೆಯಿಂದ
ನೀನಿಲ್ಲದೆ ನಾ ಬದುಕಲಾರೆ
ನನ್ನಯ ಬಾಳಿಗೆ ಬೆಳಕಾಗಿರು ಕರುಣಾ ಸಾಗರನಾದ ಓ ಯೇಸುವೆ

ಗತಿಸಿ ಹೋದ ಪ್ರತಿದಿನವು ನನ್ನಯ ಬಾಳಿಗೆ ಅಡಿಪಾಯವು
ನೆನೆಸುವೆ ನಾ ನಿನ್ನ ಕಾರ್ಯವ ದಿನದಿನ ಪ್ರತಿ ಕ್ಷಣ ಅನುದಿನ
ನನ್‌ ಜೀವಿತ ಕಾಲವೆಲ್ಲ ನಿನಗೆ ಸಾಕ್ಷಿಯಾಗಿ ನಾ ನಿಲ್ಲುವೆ 2

ನಿನ್ನ ಹೊರತು ನನಗ್ಯಾರು ಇಲ್ಲವೆ ಇಹದಿ ಓ ಯೇಸುವೆ
ನೀನಿಲ್ಲದ ಈ ಜೀವನ ಬರುಡು ಭೂಮಿಗೆ ಸಮಾನವೆ
ಅಂಧಕಾರವ ತೆಗುದು ಬಿಡು ನನ್ನ ಬಾಳನ್ನು ಹೊಳೆಯ ಮಾಡು 2

ನಿನ್ನ ರಕ್ಷ ಕವಚದಿಂದ ನನ್ನ ಹುದಗಿಸಿ ಕಾದಿರುವೆ
ಪ್ರೀತಿಯುಳ್ಳ ನಿನ್ನ ಮುಖವ ನಿತ್ಯ ದರ್ಶಿಸಿ ಆರಾಧಿಸುವೆ
ನಿನ್ನ ಎದೆಯಲ್ಲಿ ಎಂದೆಂದೂ ಒರಗಿಕೊಂಡು ಮಗುವಾಗುವೆ 2

    Jeba
        Tamil Christians songs book
        Logo