Ba Prabhuve nanna – ಬಾ ಪ್ರಭುವೇ ನನ್ನ
Ba Prabhuve nanna – ಬಾ ಪ್ರಭುವೇ ನನ್ನ
ಯೇಸು ಇದ್ದರೆ ಆನಂದವು,
ಯೇಸು ಇದ್ದರೆ ಧೈರ್ಯವು,
ಯೇಸು ಇದ್ದರೆ ಸೌಖ್ಯವೂ,
ಯೇಸುವೇ ಪರಿಪೂರ್ಣನೂ
ಬಾ ಪ್ರಭುವೇ ನನ್ನ ಹೃದಯದಿ ನೆಲೆಸು ಬಾ
ನನ್ನ ಹರಸು,ನನ್ನ ಬೆಳೆಸು, ನಡೆಸು ಬಾ.
1.ನಿನ್ನ ಸ್ಪರ್ಶದಿಂದ ನಾ ಸದಾ ಹರುಷದಿಂದಿರುವೇ
ನಿನ್ನ ಧರುಶನ ಪಡೆದು ನಾ ಧನ್ಯನಾಗಿಹೇ
ನಿನ್ನನ್ನು ಬಿಟ್ಟರೆ ಯಾರಿಲ್ಲ, ನೀನಿಲ್ಲದ ಬದುಕ್ಕಿಲ್ಲ
ನಿನ್ನನ್ನೇ ನಂಬಿರುವೇ ದೇವಾ
ನಿನಗಾಗಿ ಜೀವಿಸುವೇ ದೇವಾ
2.ನಿನ್ನ ಜೀವ ವಾಕ್ಯವು ನನಗೆ ಬೆಳಕು ತೋರಿದೆ
ನಿನ್ನ ದೇಹ ರಕ್ತವೂ ನನ್ನಲ್ಲಿ ಶಕ್ತಿ ತುಂಬಿದೆ
ನಿನ್ನಯ ಪ್ರೀತಿ ಸಾಕೆನಗೆ ಬೇರೇನೂ ಬೇಡ ಎನಗೆ
ನೀ ನನ್ನ ಸ್ನೇಹಿತನು ದೇವಾ
ಪ್ರತೀ ಕ್ಷಣವೂ ನನ್ನ ಕಾಯುವ ದೇವಾ