Appanu Neene Ammanu Neene kannada christian song lyrics – ಅಪ್ಪಾನೂ ನೀನೇ ಅಮ್ಮಾನು ನೀನೆ

Deal Score0
Deal Score0

Appanu Neene Ammanu Neene kannada christian song lyrics – ಅಪ್ಪಾನೂ ನೀನೇ ಅಮ್ಮಾನು ನೀನೆ

ಅಪ್ಪಾನೂ ನೀನೇ ಅಮ್ಮಾನು ನೀನೆ
ನನ್ನ ಹೊತ್ತು ಹೋಗುವ ಒಳ್ಳೆ ಕುರುಬನು ನೀನೆ
ಯೇಸಯ್ಯಾ ಯೇಸಯ್ಯಾ ಯೇಸಯ್ಯಾ ಯೇಸಯ್ಯಾ

1.ಅನಾಥನು ನಾ ಎಲ್ಲಿಗೆ ಹೋಗಲಿ
ನನಗ್ಯಾರು ಆಶ್ರಯವಿಲ್ಲ
ದರೀದ್ರಾನು ನಾ ಎಲ್ಲಿಗೆ ಹೋಗಲಿ
ನನಗ್ಯಾರು ದಿಕ್ಕೆ ಇಲ್ಲಾ
ನೀನಾದರೂ ನನನ್ನು ಬಲ ಪಡಿಸು
ನನ್ನನ್ನು ತೊರೆಯದಿರು

2.ಬಲಹೀನನು ನಾನೆಂದು ತಿಳಿದು
ನನ್ನನ್ನು ಹಿಂಸಿಸುತಾರೆ
ಗತಿ ಹೀನನು ನಾನೆಂದು ತಿಳಿದು
ನನ್ನನ್ನು ನಿಂದಿಸುತಾರೆ
ನಾನಾದರೂ ಯೇಸಯ್ಯಾ ನಿನ್ನಲ್ಲೆ
ಭರವಸೆಯಿಟ್ಟಿರುವೆ

3.ಕರೆದೀರುವೆ ನಿನ್ನ ಸೇವೆಗೆ
ಅದ ನಾನು ಮರೆಯುವೇನೆ
ನನ್ನ ಆಸೆಯು ಅದು ನಿನ್ನ ಸೇವೆಯೆ
ಬೇರೇನೂ ಬೇಡ ತಂದೆ
ನನ್ನ ಸೇವೆಯ ಜೊತೆಯಲಿ ಕೈಹಿಡಿದು
ನನ್ನನ್ನು ನಡೆಸಯ್ಯಾ

ಅಪ್ಪಾನೂ ನೀನೇ ಅಮ್ಮಾನು ನೀನೆ Kannada Christian Song with Lyrics

Jeba
      Tamil Christians songs book
      Logo